Sunday, December 22, 2024
Google search engine
Homeಮುಖಪುಟಟಿಕೆಟ್ ಹಂಚಿಕೆಯಲ್ಲಿ ವಂಚನೆ - ಬಿಜೆಪಿ ವಿರುದ್ಧ ಹುಲಿನಾಯ್ಕರ್ ಆಕ್ರೋಶ

ಟಿಕೆಟ್ ಹಂಚಿಕೆಯಲ್ಲಿ ವಂಚನೆ – ಬಿಜೆಪಿ ವಿರುದ್ಧ ಹುಲಿನಾಯ್ಕರ್ ಆಕ್ರೋಶ

ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮೂರು ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ತತ್ವಕ್ಕೆ ಪೂರಕವಾಗಿ ಟಿಕೆಟ್ ಹಂಚಿಕೆಯಾಗಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್ ಹುಲಿನಾಯ್ಕರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹುಲಿನಾಯ್ಕರ್, ತುಮಕೂರು ಜಿಲ್ಲೆಯಲ್ಲಿ ಲಿಂಗಾಯತ, ಒಕ್ಕಲಿಗ ಸಮುದಾಯದ ಬಳಿಕ ಹಿಂದುಳಿದ ವರ್ಗದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಜಿಲ್ಲೆಯ 11 ಕ್ಷೇತ್ರದಲ್ಲಿ ಒಬ್ಬ ಹಿಂದುಳಿದ ವರ್ಗದವರಿಗೂ ಟಿಕೆಟ್ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಮೆಚ್ಚಿ ಹಿಂದುಳಿದ ಸಮುದಾಯಗಳು ಅವರನ್ನು ಬೆಂಬಲಿಸಲು ಸಿದ್ದವಿವೆ. ಆದರೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಟಿಕೆಟ್ ಆಕಾಂಕ್ಷಿತರಿಗೆ ಚುನಾವಣೆಯಲ್ಲಿ ಸಮಾನ ಪ್ರಾತಿನಿಧ್ಯ ಕಲ್ಪಿಸದೆ ದೂರವಿಟ್ಟಿರುವುದು ಸಮಂಜಸವಲ್ಲ ಎಂದು ಟೀಕಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಸಾಮಾನ್ಯ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆಯಾಗಿಲ್ಲ. ತುಮಕೂರು ನಗರದ ಬಿಜೆಪಿ ಸಂಭಾವ್ಯ ಅಭ್ಯರ್ತಿಗಳ ಪಟ್ಟಿಯಲ್ಲಿ ನನ್ನ ಹೆಸರು, ಗುಬ್ಬಿ ಕ್ಷೇತ್ರಕ್ಕೆ ಬೆಟ್ಟಸ್ವಾಮಿ ಅವರ ಹೆಸರು ದಿಲ್ಲಿ ಮಟ್ಟದವರೆಗೆ ಶಿಫಾರಸ್ಸು ಆಗಿತ್ತು. ಒಳ್ಳೆಯವರು ಟಿಕೆಟ್ ಪಡೆಯಲು ನೀವು ಹೆಚ್ಚು ಅರ್ಹರು ಎಂದೆಲ್ಲ ಪಕ್ಷದ ಪ್ರಮುಖರು ಹೇಳುತ್ತಾರೆ. ಆದರೆ ಟಿಕೆಟ್ ಹಂಚಿಕೆ ಮಾಡುವಾಗ ಮಾತ್ರ ಹಿಂದುಳಿದವರನ್ನು ಕೈಬಿಡಲಾಗಿದೆ. ಹಿಂದುಳಿದ ವರ್ಗದವರನ್ನು ಬರೀ ಪಕ್ಷದ ಸಂಘಟನೆ, ಪ್ರಚಾರ ಕಾರ್ಯಕ್ಕೆ ಸೀಮಿತಗೊಳಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದಂತೆ ಪಕ್ಷದ ಟಿಕೆಟ್ ಆಯ್ಕೆಯ ಪ್ರಮುಖ ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪರ ಟಿಕೆಟ್ ಇವರಿಗೆ ಕೊಡಲೇಬೇಕು, ಕೊಡದೇ ಇದ್ದರೆ ನಾನು ಸ್ಪರ್ಧಿಸುವುದಿಲ್ಲ ಎಂದು ಗಟ್ಟಿಯಾಗಿ ಹೇಳುವ ನಾಯಕರ ಕೊರತೆ ಇದೆ. ಹಾಗಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಟಿಕೆಟ್ ವಂಚಿತರಾಗುತ್ತಿದ್ದು, ಹೀಗೆ ಮುಂದುವರಿದರೆ ಸಾಮಾಜಿಕ ನ್ಯಾಯ ಪರಿಕಲ್ಪನೆ ಬರೀ ಬಾಯಿಮಾತಿಗೆ ಸೀಮಿತವಾಗುತ್ತದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular