ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ್ ಕಾರಣ. ನನಗಷ್ಟೇ ಅಲ್ಲ, ಮೈಸೂರಿನಲ್ಲಿ ರಾಮದಾಸ ಅವರಿಗೂ ಟಿಕೆಟ್ ತಪ್ಪಲು ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಒಂದೇ ಕಾರಣವಲ್ಲ. ಇದರಲ್ಲಿ ಹಲವಾರು ಜನರಿದ್ದಾರೆ. ಈಗ ಹೆಸರು ಹೇಳುವ ಸಮಯ ಬಂದಿದೆ. ರಾಜ್ಯ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿ ಎಂದು ಆಪಾದಿಸಿದರು.
ನಾನು ಈ ಹಿಂದೆ ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳಿದ್ದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಂದಾಗಿ ನನಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಅವರ ಜೊತೆ ಇನ್ನೂ ಹಲವರು ಇರಬಹುದು ಎಂದು ಹೇಳಿದ್ದಾರೆ.
ನನ್ನ ವಿರುದ್ದ ಹೈಕಮಾಂಡ್ ಬಳಿ ಅಪಪ್ರಚಾರ ಮಾಡಲಾಯಿತು. ಒಂದು ತಂಡ ನನ್ನ ವಿರುದ್ಧ ಕೆಲಸ ಮಾಡಿತು. ಇದರಿಂದಾಗಿ ನನಗೆ ಟಿಕೆಟ್ ತಪ್ಪಿತ್ತು. ನನಗಷ್ಟೇ ಅಲ್ಲ, ರಾಮದಾಸ ಅವರಿಗೇ ಟಿಕೆಟ್ ತಪ್ಪಲೂ ಸಂತೋಷ್ ಅವರೇ ಕಾರಣ ಎಂದು ಆರೋಪಿಸಿದರು.