Thursday, December 26, 2024
Google search engine
Homeಜಿಲ್ಲೆಬಡವರ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿಲ್ಲ - ಜನಪರ ಚಿಂತಕ ಕೆ.ದೊರೈರಾಜ್

ಬಡವರ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿಲ್ಲ – ಜನಪರ ಚಿಂತಕ ಕೆ.ದೊರೈರಾಜ್

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಮತ್ತು ಜೆಡಿಎಸ್ ನ ಪಂಚರತ್ನ ಯಾತ್ರೆಯಲ್ಲಿ ಸ್ಲಂ ಜನರ ಮತ್ತು ಬಡವರ ಸಮಸ್ಯೆಗಳನ್ನು ಚರ್ಚೆ ಮಾಡದೇ ಹಣ ಬಾಡೂಟ, ದೇವರ ಮೇಲೆ ಪ್ರಮಾಣ ಮಾಡುವುದು, ಕಿಟ್ ಗಳನ್ನು ಹಂಚಿಕೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ತಿಳಿಸಿದರು.

ತುಮಕೂರಿನ ಪತ್ರಿಕಾ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಸ್ಲಂ ಜನರ ಪ್ರಣಾಳೀಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸ್ಲಂಜನರನ್ನು ರಾಜಕೀಯವಾಗಿ ಜಾಗೃತಿಗೊಳಿಸಲು ಸ್ಲಂಜನಾಂದೋಲನ ಕರ್ನಾಟಕ ಕೊಳಗೇರಿ ಜನರ ಜಲ್ವಂತ ಸಮಸ್ಯೆಗಳ ಮೇಲೆ ಪ್ರಣಾಳಿಕೆ ಹೊರತಂದಿದ್ದು ಈ ಅಂಶಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಹೇಳಿದರು.

ಅದೇ ರೀತಿ ಚುನಾವಣೆಯಲ್ಲಿ ಮತ ಕೇಳಲು ಬರುವ ಅಭ್ಯರ್ಥಿಗಳನ್ನು ನಮಗೆ ಘನತೆಯ ವಸತಿ, ನಗರ ಉದ್ಯೋಗ ಖಾತ್ರಿ ಮತ್ತು ಬಡತನ ಮುಕ್ತಕ್ಕಾಗಿ ನಿಮ್ಮ ಪಕ್ಷದ ನಿಲುವೇನು,? ಎಂಬ ಬಗ್ಬೆ ಪ್ರಶ್ನಿಸಿ ಮತ ಚಲಾಯಿಸಬೇಕು, ಮತವೇ ನಮ್ಮ ವಿಮೋಚನೆಯ ಅಸ್ತ್ರವಾಗಿದೆ ಎಂದರು.

ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ರಾಜ್ಯದ 18 ಜಿಲ್ಲೆಗಳ 1 ಸಾವಿರಕ್ಕೂ ಮೇಲ್ಪಟ್ಟ ಕೊಳಚೆ ಪ್ರದೇಶಗಳಲ್ಲಿ 12 ಸ್ಲಂಜನರ ಪ್ರಣಾಳಿಕೆ ಮೇಲೆ ರಾಜಕೀಯ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್‌ಆದ್ಮಿ ಪಕ್ಷಗಳ ಪ್ರಣಾಳಿಕಾ ಸಮಿತಿಗೆ ನಮ್ಮ ಜನರ ಆಗ್ರಹಗಳನ್ನು ನೀಡಿ ಸಮಾಲೋಚನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅಂಶಗಳ ಮೇಲೆ ಬದ್ದತೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕರೆ ನೀಡಲಾಗುವುದು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular