ಸ್ನೂಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ 7 ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಿಸೋಡಿಯ ಅವರನ್ನು ದೀರ್ಘಕಾಲದವರೆಗೆ ಜೈಲಿನಲ್ಲಿಡಲು ಇದು ಪ್ರಧಾನಿಯ ಯೋಜನೆಯಾಗಿದೆ ಎಂದು ಆರೋಪಿಸಿದ್ದಾರೆ.
ಮನೀಶ್ ವಿರುದ್ಧ ಹಲವಾರು ಸುಳ್ಳು ಪ್ರಕರಣಗಳನ್ನು ಹಾಕುವುದು ಮತ್ತು ದೀರ್ಘಕಾಲದವರೆಗೆ ಬಂಧನದಲ್ಲಿರಿಸುವುದು ಪ್ರಧಾನಿಯ ಯೋಜನೆಯಾಗಿದ್ದು ಇದು ದುಃಖ ತರುವಂತಹದ್ದು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಕ್ರಿಮಿನಲ್ ಪಿತೂರಿ, ಆಸ್ತಿಯ ಅಪ್ರಾಮಾಣಿಕ ದುರುಪಯೋಗ, ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆಯ ಉದ್ದೇಶಕ್ಕಾಗಿ ಪೋರ್ಜರಿ, ಅಸಲಿ ಖೋಟಾ ದಾಖಲೆ, ಖಾತೆಗಳನ್ನು ನಕಲಿ ಮಾಡುವುದು ಮತ್ತು ಸಾರ್ವಜನಿಕ ನೌಕರನಿಂದ ಕ್ರಿಮಿನಲ್ ದುರ್ನಡತೆಯ ಆರೋಪಗಳ ಮೇಲೆ ಸಿಸೋಡಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.