Friday, November 22, 2024
Google search engine
Homeಮುಖಪುಟಶುಲ್ಕ ಭರಿಸಿಲ್ಲವೆಂದು ಪರೀಕ್ಷೆಗೆ ಕೂರಿಸದ ಶಾಲೆ - ಪೋಷಕರು-ಶಿಕ್ಷಕರ ನಡುವೆ ಮಾರಾಮಾರಿ

ಶುಲ್ಕ ಭರಿಸಿಲ್ಲವೆಂದು ಪರೀಕ್ಷೆಗೆ ಕೂರಿಸದ ಶಾಲೆ – ಪೋಷಕರು-ಶಿಕ್ಷಕರ ನಡುವೆ ಮಾರಾಮಾರಿ

ಮೈಸೂರಿನ ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ನಡುವೆ ಮಾರಾಮಾರಿ ನಡೆದಿದೆ.

ಮೈಸೂರು ನಗರದ ಬೋಗಾದಿ 2ನೇ ಹಂತದಲ್ಲಿರುವ ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಗೆ ಕೂರಿಸದ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಲ್ಕ ಕಟ್ಟಿಲ್ಲವೆಂದು 16 ಮಕ್ಕಳನ್ನು ಪರೀಕ್ಷೆಗೆ ಕೂರಿಸಿಲ್ಲ. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಖುಷಿ ಥಳಿಸಿದರು ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆ ಸುಡಿ ಬಿಸಿಲಲ್ಲೇ ಪೋಷಕರು ಶಾಲೆಗೆ ಧಾವಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಮ್ಯಾನೇಜರ್ ಹರೀಶ್​​ಗೆ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರಸ್ವತಿಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಸುದ್ಧಿ ಟಿವಿ ಫೇಸ್ಬುಕ್ ವಾಲ್ ನಲ್ಲಿ ಬರೆಯಲಾಗಿದೆ.

ವಿದ್ಯಾಶ್ರಮ ಹೆಸರಲ್ಲಿ ಈ ಶಾಲೆ ನಡೆಯುತ್ತಿದ್ದು ಶುಲ್ಕ ಸಂಬಂಧ 16 ಜನ ವಿದ್ಯಾರ್ಥಿಗಳ ವಿಚಾರದಲ್ಲಿ ಗೊಂದಲವಿದೆ. ಸದ್ಯ ಶುಲ್ಕ ಕಟ್ಟದ 16 ವಿದ್ಯಾರ್ಥಿಗಳು ಶಾಲೆಯ ಹೊರಗೆ ಕುಳಿತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular