ಸಚಿವ ಕೆ.ಸಿ.ನಾರಾಯಣಗೌಡ ಅವರು ಕಾಂಗ್ರೆಸ್ ಗೆ ಹೋಗಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಗದಗ ಜಿಲ್ಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ಕಾಂಗ್ರೆಸ್ ಪಕ್ಷ ಸೇರಿದರೂ. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಿಜೆಪಿಗೆ ಬರುವವರು ಬಹಳ ಮಂದಿ ಇದ್ದಾರೆ ಎಂದು ತಿಳಿಸಿದರು.
ನಮ್ಮ ಪಕ್ಷದಿಂದ ಇಬ್ಬರು ಹೋದರೆ, 20 ಜನ ಬಿಜೆಪಿಗ ಬರುತ್ತಾರೆ. ಸ್ವಲ್ಪ ದಿನ ಕಾದು ನೋಡಿ. ಸಿದ್ದರಾಮಯ್ಯ ಬಿಜೆಪಿಗೆ ಬರುತ್ತೇನೆ ಎಂದರೂ ಸೇರಿಸಿಕೊಳ್ಳುವುದಿಲ್ಲ ಎಂದು ಸಚಿವರು ವ್ಯಂಗ್ಯವಾಡಿದರು.
ಮಾಡಾಳು ರಕ್ಷಣೆ ಇಲ್ಲ
ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳು ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಹಾಗಿದ್ದರೆ ನಾವು ಲೋಕಾಯುಕ್ತ ಸಂಸ್ಥೆಯಿಂದ ರಕ್ಷಣೆ ಕೊಡಬಹುದಾಗಿತ್ತು. ಲೋಕಾಯುಕ್ತ ಸಂಸ್ಥೆ ನಿಷ್ಪಕ್ಷಪಾತ ತನಿಖೆ ಮಾಡುತ್ತಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ 8 ಸಾವಿರ ಹಗರಣ ಮುಚ್ಚಿಹಾಕಿದ್ದಾರೆ. ಕೆಂಪಣ್ಣ ಆಯೋಗ ರಚನೆ ಮಾಡಿ ಲೋಕಾಯುಕ್ತ ಹಾವು ಕಿತ್ತ ಹಲ್ಲಿನಂತೆ ಮಾಡಿ ಎಸಿಬಿ ರಚನೆ ಮಾಡಿದರು ಎಂದು ಟೀಕಿಸಿದರು.


