ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯಗಳು, ನ್ಯಾಯಾಧೀಶರು, ರೈತರು ಮತ್ತು ವ್ಯಾಪಾರಿಗಳು ಸೇರಿದಂತೆ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದು ಎಲ್ಲರನ್ನು ಎದುರು ಹಾಕಿಕೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ನ್ಯಾಯಾಧೀಶರ ನೇಮಕದ ಕೊಲಿಜಿಯಂ ವ್ಯವಸ್ಥೇಯು ಸುಪ್ರೀಂಕೋರ್ಟ್ ಮತ್ತು ಕೇಮದ್ರದ ನಡುವೆ ಪ್ರಮುಖ ಫ್ಲಾಶ್ ಪಾಯಿಟ್ ಆಗುತ್ತಿದೆ ಎಂಬ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ ಕೇಜ್ರಿವಾಲ್ ಇತರರ ಕೆಲಸಗಳಲ್ಲಿ ಮಧ್ಯಪ್ರವೇಶಿಸದಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಸಲಹೆ ನೀಡಿದರು.
ಕೇಂದ್ರ ಸರ್ಕಾರ ಎಲ್ಲರೊಂದಿಗೂ ಜಗಳ ಏಕೆ? ನ್ಯಾಯಾಧೀಶರು, ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಗಳು, ರೈತರು ಮತ್ತು ವ್ಯಾಪಾರಿಗಳೊಂದಿಗೆ ಜಗಳ ಕಾಯಬೇಕಾಗಿದೆ. ಎಲ್ಲರೊಂದಿಗೂ ಜಗಳವಾಡುವುದರಿಂದ ದೇಶವು ಪ್ರಗತಿಯಾಗುವುದಿಲ್ಲ. ನಿಮ್ಮ ಕೆಲಸವನ್ನು ಮಾಡಿ ಮತ್ತು ಇತರರು ಅವರ ಕೆಲಸವನ್ನು ಮಾಡಲು ಬಿಡಿ. ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಎಎಪಿ ಸರ್ಕಾರವು ಕೇಂದ್ರದಿಂದ ನೇಮಕಗೊಂಡ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಆಡಳಿತ ಮತ್ತು ಅಧಿಕಾರ ವ್ಯಾಪ್ತಿ ಸಂಬಂಧಿತ ವಿಷಯಗಳ ಬಗ್ಗೆ ಚಾಲನೆಯಲ್ಲಿರುವ ಜಗಳದಲ್ಲಿ ತೊಡಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.