ಇಂತದೊಂದು ಸಿನಿಮಾ ಬೇಕಿತ್ತು..ಆಧುನಿಕತೆಯ ಆಡಂಬರವಿಲ್ಲದ, ನೈಜವಾಗಿ ದಲಿತರು ಬದುಕುವ ರೀತಿ,ಅವರದ್ದೇ ಪದ್ಧತಿಗಳು, ಸಂಸ್ಕೃತಿಯನ್ನೂ ಒಳಗೊಂಡಂತೆ ಪಾಲಾರ್ ಸಿನಿಮಾ ಗಮನ ಸೆಳೆಯುತ್ತದೆ ಎಂದು ಲೇಖಕಿ ಕೋಮಲ ಕಲ್ಲೂಡಿ ಹೇಳಿದ್ದಾರೆ.
ಅಪ್ಪಟ ಕೋಲಾರ, ಚಿಕ್ಕಬಳ್ಳಾಪುರ ಮಣ್ಣ ಸೊಗಡಿನ ಭಾಷೆಯಲ್ಲಿ ಅರಳಿದ ಸ್ವಚ್ಛ ಮನಸಿನ ಮುಗ್ಧ ಜನರ ಶ್ರಮದಾಯಕ ಜೀವನ, ಅನ್ಯಾಯಕ್ಕೊಳಗಾದವರ ಕಣ್ಣೀರು ವೇದನೆ ಅವರ ಹೋರಾಟದ ಕೆಚ್ಚನ್ನು ಇಂಚಿಂಚು ಮನಸ್ಸಿಗೆ ನಾಟುವಂತೆ ಚಿತ್ರ ನಿರ್ದೇಶಕ ಜೀವನ್ ನವೀನ್ ತೆರೆ ಮೇಲೆ ತಂದಿದ್ದಾರೆ.
ನಾಯಕಿ ಉಮಾ ವೈ.ಜಿ. ರತ್ನಳ ಪಾತ್ರದಲ್ಲಿ ಅನ್ಯಾಯದ ವಿರುದ್ಧ ಅಬ್ಬರಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಾರೆ. ಹಾಗೇ ನಾಯಕ ಮುನಿರಾಜನ ಪಾತ್ರವನ್ನು ಹೆಚ್ಚು ಹೊತ್ತು ದುಡಿಸಿಕೊಳ್ಳಬಹುದಿತ್ತು ಎಂದೆನಿಸಿದ್ದು ಬಿಟ್ಟರೆ ಮಿಕ್ಕೆಲ್ಲಾ ಪಾತ್ರಗಳು ಸಹನೀಯವೆನಿಸಿ ಚಿತ್ರ ನೇರ ಎದೆಗಿಳಿಯುತ್ತದೆ.
ಸಾಲಾರ್ ಇದು ನಮ್ಮದೇ ಸಿನಿಮಾ. ಇಂದಿನ ತುರ್ತುಗಳಲ್ಲಿ ಪಾಲಾರ್ ಸಿನಿಮಾ ಗೆಲ್ಲಬೇಕಿದೆ..ಗೆಲುವಾಗಲಿ ಎಂದು ಕೋಮಲ ಕಲ್ಲೂಡಿ ತಿಳಿಸಿದ್ದಾರೆ.