Monday, September 16, 2024
Google search engine
Homeಮುಖಪುಟನೇಪಾಳದಲ್ಲಿ ವಿಮಾನ ಪತನ - 40ಕ್ಕೂ ಹೆಚ್ಚು ಮಂದಿ ಸಾವು

ನೇಪಾಳದಲ್ಲಿ ವಿಮಾನ ಪತನ – 40ಕ್ಕೂ ಹೆಚ್ಚು ಮಂದಿ ಸಾವು

ಹತ್ತು ಮಂದಿ ವಿದೇಶಿಗರು ಸೇರಿದಂತೆ 72 ಜನರಿದ್ದ ವಿಮಾನವು ನೇಪಾಳದ ಪೊಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ಕಮರಿಗೆ ಬಿದ್ದು 40ಕ್ಕು ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಜನವರಿ 15 ರಂದು ಸಂಭವಿಸಿದೆ.

ವಿಮಾನ ಪತನದಲ್ಲಿ ಸಾವನ್ನಪ್ಪಿರುವವರಲ್ಲಿ ಎಂಟು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತಪಟ್ಟವರಲ್ಲಿ ಐದು ಮಂದಿ ಭಾರತೀಯರು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಧ್ಯ ನೇಪಾಳದ ಹಳೆಯ ಮತ್ತು ಹೊಸ ಫೋಖರಾ ವಿಮಾನ ನಿಲ್ದಾಣದಗಳ ನಡುವೆ ವಿಮಾನ ಪತನಗೊಂಡಿದೆ ಎಂದು ಏರ್ ಲೈನ್ ವಕ್ತಾರ ಸುದರ್ಶನ್ ಬರ್ತೌಲಾ ತಿಳಿಸಿದ್ದಾರೆ ಎಎಫ್.ಪಿ ವರದಿಯನ್ನು ಉಲ್ಲೇಖಿಸಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ವಿಮಾನ ಪತನದ ನಂತರ ಅವಶೇಷಗಳು ಬೆಂಕಿಗೆ ಆಹುತಿಯಾಗಿದ್ದು ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಡುವಂತಾಯಿತು ಎಣದಯ ಸ್ಥಳೀಯ ಅಧಿಕಾರಿ ಗುರುದತ್ತ ಧಾಕಲ್ ತಿಳಿಸಿದ್ದಾರೆ.

ನೇಪಾಳದ ವಾಯು ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. ತಲುಪಲು ಕಷ್ಟವಾದ ಪ್ರದೇಶಗಳು ಮತ್ತು ವಿದೇಶಿ ಚಾರಣಿಗರು ಮತ್ತು ಆರೋಹಿಗಳ ನಡುವೆ ಸರಕುಗಳ ಮತ್ತು ಜನರನ್ನು ಸಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular