Tuesday, December 3, 2024
Google search engine
Homeಮುಖಪುಟ1 ತಿಂಗಳಲ್ಲಿ ಕೊರೊನಕ್ಕೆ ಚೀನಾದಲ್ಲಿ 60 ಸಾವಿರ ಬಲಿ - ರಾಷ್ಟ್ರೀಯ ಆಯೋಗ ವರದಿ

1 ತಿಂಗಳಲ್ಲಿ ಕೊರೊನಕ್ಕೆ ಚೀನಾದಲ್ಲಿ 60 ಸಾವಿರ ಬಲಿ – ರಾಷ್ಟ್ರೀಯ ಆಯೋಗ ವರದಿ

ಚೀನಾದಲ್ಲಿ ಕೊರೊನ ಸಾಂಕ್ರಾಮಿಕ ರೋಗದ ಸ್ಥಿತಿಯ ಬಗ್ಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡಲು ಸರ್ಕಾರ ವಿಫಲವಾಗಿದೆ ಎಂಬ ದೂರುಗಳ ನಂತರ ಡಿಸೆಂಬರ್ ಮೊದಲ ವಾರದಿಂದ ಕೋವಿಡ್-19 ಸೋಂಕು ಹೊಂದಿರುವ ಜನರಲ್ಲಿ ಸುಮಾರು 60 ಸಾವಿರ ಸಾವುಗಳು ಸಂಭವಿಸಿವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಕೋವಿಡ್ 19 ರಿಂದ ಉಂಟಾದ ಉಸಿರಾಟದ ವೈಫಲ್ಯದಿಂದ 5,503 ಸಾವುಗಳು ಮತ್ತು ಕೋವಿಡ್-19ರೊಂದಿಗೆ ಇತರೆ ಕಾಯಿಲೆಗಳಿಂದ 54,435 ಸಾವುಗಳು ಸಂಭವಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆ ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಇದು ಹೆಚ್ಚಿನ ಜನರು ಮನೆಯಲ್ಲಿ ಸಾವನ್ನಪ್ಪಿರುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ವರದಿಯು ಚೀನಾದ ಅಧಿಕೃತ ಕೋವಿಡ್-19 ಸಾವಿನ ಸಂಖ್ಯೆಯನ್ನು 10,775ಕ್ಕೆ ದ್ವಿಗುಣಗೊಳಿಸುತ್ತದೆ ಎಂದು ಹೇಳಲಾಗಿದೆ. ಜನವರಿ 8ರಂದು ಅಧಿಕೃತ ಟೋಲ್ 5,272 ಆಗಿತ್ತು ವರದಿ ತಿಳಿಸಿದೆ.

ಆಂಟಿ ವೈರಸ್ ನಿಯಂತ್ರಣಗಳನ್ನು ಥಟ್ಟನೆ ಎತ್ತಿದ ನಂತರ ಚೀನಾ ಸರ್ಕಾರವು ಡಿಸೆಂಬರ್ ಆರಂಭದಲ್ಲಿ ಕೋವಿಡ್-19 ಸೋಂಕುಗಳು ಮತ್ತು ಸಾವುಗಳ ಕುರಿತು ಅಂಕಿಅಂಶಗಳನ್ನು ವರದಿ ಮಾಡುವುದನ್ನು ನಿಲ್ಲಿಸಿತು. ಸೋಂಕುಗಳ ಉಲ್ಭಣದ ಮಧ್ಯೆ ಹೆಚ್ಚಿನ ಮಾಹಿತಿಗಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸರ್ಕಾರಗಳು ಬೀಜಿಂಗ್ ಗೆ ಮನವಿ ಮಾಡಿದವು ಎಂದು ಹೇಳಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular