ಜನವರಿ 12ರಂದು ರಾಷ್ಟ್ರೀಯ ದ್ರಾವಿಡ ಸಂಘ ಉದ್ಘಾಟನೆ ಮಾಡಲಾಗುವುದು ಎಂದು ಹೋರಾಟಗಾರ ಅಗ್ನಿ ಶ್ರೀಧರ್ ಹೇಳಿದ್ದಾರೆ. ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿಯವರು ನೆರವೇರಿಸಲಿದ್ದಾರೆ.
ಬೆಂಗಳೂರಿನ ಮಹಾರಾಣಿ ಕಾಲೇಜು ಪಕ್ಕದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಜನಪರ ಚಿಂತಕ ಬಂಜಗೆರೆ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ.ಪಾಟೀಲ್, ಚಿತ್ರ ಸಾಹಿತಿ ಕವಿರಾಜ್, ಕ್ರಿಕೆಟ್ ಪಟು ವೇದ ಕೃಷ್ಣಮೂರ್ತಿ ಅತಿಥಿಯಾಗಿ ಆಗಮಿಸಲಿದ್ದಾರೆ.
ಇಂದು ನಾವು ಸಂದಿಗ್ದ ಪರಿಸ್ಥಿತಿಯಲ್ಲಿದ್ದೇವೆ. ದೇಶ ಸಾಗುತ್ತಿರುವ ಹಾದಿ ಯಾರಲ್ಲೂ ಭರವಸೆ ಮೂಡಿಸಿಲ್ಲ. ಆರ್.ಎಸ್.ಎಸ್ ಎನ್ನುವ ರಾಷ್ಟ್ರೀಯ ಸನಾತನ ಸಂಘ ನಮ್ಮನ್ನೆಲ್ಲಾ ಶಾಶ್ವತವಾಗಿ ಗುಲಾಮಗಿರಿಗೆ ದೂಡುತ್ತಿದೆ. ಈ ನೆಲದ ಜನರ ಜೀವನ ಶೈಲಿಯನ್ನು ಬದಲಾಯಿಸುತ್ತಿದೆ ಎಂದು ಅಗ್ನಿ ಶ್ರೀಧರ್ ಹೇಳಿದರು.