ಅಲಹಾಬಾದ್ ವಿಶ್ವವಿದ್ಯಾನಿಲಯವು ಸೋಮವಾರ ಹಿಂಸಾಚಾರದಿಂದ ತತ್ತರಿಸಿತು. ವಿದ್ಯಾರ್ಥಿಗಳು, ಭದ್ರತಾ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ವಿದ್ಯಾರ್ಥಿಗಳು ವಾಗ್ವಾದ ನಡೆಸಿದರು.
ವಿದ್ಯಾರ್ಥಿ ನಾಯಕನನ್ನು ಕ್ಯಾಂಪಸ್ ಗೆ ಪ್ರವೇಶಿಸಿದಂತೆ ಗಾರ್ಡುಗಳು ತಡೆದಾಗ ಜಗಳಕ್ಕೆ ಕಾರಣವಾಯಿತು. ಕ್ಯಾಂಪಸ್ ನ ಒಳಗಿನ ಬ್ಯಾಂಕ್ ಗೆ ಹೋಗುತ್ತಿದ್ದೇನೆ ಎಂದು ವಿದ್ಯಾರ್ಥಿ ನಾಯಕರ ಹೇಳಿದರೂ ಅದಕ್ಕೆ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ.
ಇದರಿಂದ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಮತ್ತು ಪೋಲೀಸರ ನಡುವೆ ವಾಗ್ವಾದ ನಡೆದು ಕಲ್ಲು ತೂರಾಟಕ್ಕೆ ದಾರಿಯಾಯಿತು.
ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆಯೇ ಹೆಚ್ಚುವರಿ ಪೊಲೀಸರನ್ನು ಕರೆಸಲಾಯಿತು ಮತ್ತು ಒಳಗೆ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಧ್ವಂಸಗೊಳಿಸಲಾಯಿತು.
ವರದಿಗಳ ಪ್ರಕಾರ ಗಲಾಟೆಯಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ಪೊಲೀಸರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.