Saturday, October 19, 2024
Google search engine
Homeಮುಖಪುಟಕಾಂಗ್ರೆಸ್ ಭಯೋತ್ಪಾದಕರ ಪರವೋ, ದೇಶಭಕ್ತರ ಪರವೋ ಸ್ಪಷ್ಟಪಡಿಸಲಿ - ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಭಯೋತ್ಪಾದಕರ ಪರವೋ, ದೇಶಭಕ್ತರ ಪರವೋ ಸ್ಪಷ್ಟಪಡಿಸಲಿ – ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಪಕ್ಷದ ಸೋನಿಯಾಗಾಧಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ದೇಶದಲ್ಲಿ ಅಶಾಂತಿ ಉಂಟುಮಾಡುವ ಭಯೋತ್ಪಾದಕರ ಪರವೋ ಅಥವಾ ದೇಶವನ್ನು ಉಳಿಸುವ ದೇಶಭಕ್ತರ ಪರವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಪ್ರತಿ ಬಾರಿ ದೇಶದ ನೈತಿಕತೆ, ಪೊಲೀಸ್ ಇಲಾಖೆಯ ನೈತಿಕತೆ ಕಡಿಮೆ ಮಾಡುವಂತೆ ಮಾತನಾಡುವುದು ದೇಶಭಕ್ತರ ಕೆಲಸವಲ್ಲ.

ಇದನ್ನು ಸ್ಪಷ್ಟವಾಗಿ ಹೇಳಿದರೆ, ಜನ ತೀರ್ಮಾನ ಮಾಡುತ್ತಾರೆ. ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಾಗ ಅದರ ಪ್ರಕ್ರಿಯೆ ಹಾಗೂ ತನಿಖೆಯನ್ನೇ ಪ್ರಶ್ನೆ ಮಾಡುವುದು ಭಯೋತ್ಪಾದಕ ಸಂಘಟನೆಗಳಿಗೆ ನೈತಿಕ ಬಲ ತಂದುಕೊಡುತ್ತದೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಬಾಂಬ್ ಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಕುಕ್ಕರ್ ನಲ್ಲಿ ಹಾಕಿಕೊಂಡು ಹೋಗುವಾಗ ಸ್ಫೋಟವಾಗಿದೆ. ಅದನ್ನು ಮಂಗಳೂರಿನಲ್ಲಿ ಸ್ಪೋಟಗೊಳಿಸುವ ಉದ್ದೇಶವಿತ್ತು ಎನ್ನುವುದು ಸ್ಪಷ್ಟವಾಗಿದೆ. ಆತ ತನ್ನ ಗುರುತನ್ನು ಮರೆಮಾಚಿ ಈಗಾಗಲೇ 2-3 ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಭಯೋತ್ಪಾದಕ ಎಂದ ಮೇಲೆ ದೇಶದ ಹೊರಗೂ ಸಂಪರ್ಕವಿತ್ತು ಎನ್ನುವುದು ಕೂಡ ಸ್ಪಷ್ಟ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular