Saturday, October 19, 2024
Google search engine
Homeಮುಖಪುಟರಾಜಸ್ಥಾನದ ರಾಜಕೀಯ ಬಿಕ್ಕಟ್ಟು - ಮೌನ ಮುರಿದ ಸಚಿನ್ ಪೈಲಟ್

ರಾಜಸ್ಥಾನದ ರಾಜಕೀಯ ಬಿಕ್ಕಟ್ಟು – ಮೌನ ಮುರಿದ ಸಚಿನ್ ಪೈಲಟ್

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಸೆಪ್ಟೆಂಬರ್ ನಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮೌನ ಮುರಿದಿರುವ ಪಕ್ಷದ ನಾಯಕ ಸಚಿನ್ ಪೈಲಟ್ ಆಶಿಸ್ತಿನ ಕಾರಕ್ಕಾಗಿ ಎಐಸಿಸಿಯಿಂದ ನೋಟೀಸ್ ನೀಡಿದವರ ವಿರುದ್ಧ ಪಕ್ಷವು ಶೀಘ್ರವೇ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ 13 ತಿಂಗಳು ಮಾತ್ರ ಬಾಕಿ ಉಳಿದಿದ್ದು ಸಿಎಲ್.ಪಿ ಸಭೆಯಂತೆ ಎಐಸಿಸಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಪಕ್ಷದ ನಿಯಮಗಳು ಮತ್ತು ಶಿಸ್ತು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪೈಲಟ್ ಹೇಳಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಷಯದಲ್ಲಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಶೋಕ್ ಗೆಹ್ಲೋಟ್ ಶಿಬಿರದ ಶಾಸಕರು ಸೆಪ್ಟೆಂಬರ್ 25ರಂದು ಸಿಎಲ್.ಪಿ ಸಭೆಯನ್ನು ಬಿಟ್ಟು ಪಕ್ಷದ ಯಾವುದೇ ಕ್ರಮದ ವಿರುದ್ಧ ಧರಿವಾಲ್ ನಿವಾಸದಲ್ಲಿ ಸಮಾನಾಂತರ ಸಭೆ ನಡೆಸಿದ ನಂತರ ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಮುಖ್ಯ ಸಚೇತಕ ಮತ್ತು ಪಿಎಚ್.ಇಡಿ. ಸಚಿವ ಮಹೇಶ್ ಜೋಶಿ ಮತ್ತು ಆರ್.ಟಿ.ಡಿಸಿ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular