ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಬಳಸಿದ ಸಾಮಾಜಿಕ ನ್ಯಾಯದ ಘೋಷಣೆಯು ಮುಂದಿನ ದಿನಗಳಲ್ಲಿ ಆರ್.ಜೆ.ಡಿ ಮತ್ತು ಜೆಡಿಯು ವಿಲೀನದ ಸಾಧ್ಯತೆಯ ಬಗ್ಗೆ ವದಂತಿಗಳು ಹರಡಿವೆ.
ಆರ್.ಜೆ.ಡಿ ರಾಷ್ಟ್ರೀಯ ಕಾರ್ಯಕಾರಿಣಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ಉಪಮುಖ್ಯಮಂತ್ರಿ ತೇಜಸ್ವಿಯಾದವ್ ಅವರು ಪಕ್ಷದ ಹೆಸರು, ಚಿಹ್ನೆ ಮತ್ತು ಇತರ ನೀತಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಅಧಿಕಾರ ನೀಡಿದ ನಂತರ ಆರ್.ಜೆ.ಡಿ-ಜೆಡಿಯು ವಿಲೀನದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಆದಾಗ್ಯೂ ಸೋಮವಾರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿಂಗ್ ಅವರ ಸಾಮಾಜಿಕ ನ್ಯಾಯದ ಘೋಷಣೆಯು ವಿಲೀನಗೊಳ್ಳುವ ಸಾಧ್ಯತೆಯನ್ನು ಬಲಪಡಿಸಿದೆ. ಸಾಮಾಜಿಕ ನ್ಯಾಯವನ್ನು ಕೇಂದ್ರೀಕರಿಸಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಮೂಲಕ ನಾವೆಲ್ಲರೂ ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಎರಡೂ ಪಕ್ಷಗಳ ಹಿರಿಯ ನಾಯಕರು ಈ ವಿಚಾರದಲ್ಲಿ ಸಂಯಮ ಹೊಂದಿದ್ದರೂ ವಿಲೀನಕ್ಕೆ ಸಿದ್ದತೆ ನಡೆಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವರ್ಷದ ಆಗಸ್ಟ್ ನಲ್ಲಿ ಹೊಸ ಸರ್ಕಾರ ರಚಿಸಲು ಜೆಡಿಯು ಆರ್.ಜೆಡಿಯೊಂದಿಗೆ ಕೈ ಜೋಡಿಸಲು ನಿರ್ಧರಿಸುವ ಮೊದಲು ಲಾಲು ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಎರಡೂ ಪಕ್ಷಗಳನ್ನು ವಿಲೀನಗೊಳಿಸಲು ಮತ್ತು ಹೊಸ ಹೆಸರಿನೊಂದಿಗೆ ಹೊಸ ರಾಜಕೀಯ ಘಟಕವನ್ನು ಸ್ಥಾಪಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರು ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಪ್ರಕಟಿಸುವಾಗ ಸಾಮಾಜಿಕ ನ್ಯಾಯ ಎಂಬ ಪದಗುಚ್ಚವನ್ನು ಬಳಸಿದರು ಮತ್ತು 1997ರಲ್ಲಿ ಜನತಾ ದಳದಿಂದ ಬೇರ್ಪಟ್ಟಾಗ ಆರ್.ಜೆಡಿ ಈ ಘೋಷಣೆಯನ್ನು ಅಳವಡಿಸಿಕೊಂಡಿತು. ಅಂದಿನಿಂದ ಆರ್.ಜೆ.ಡಿ ತನ್ನ ರಾಜಕೀಯವನ್ನು ನಡೆಸಿಕೊಂಡು ಬರುತ್ತಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತನ್ನ ವರದಿಯಲ್ಲಿ ತಿಳಿಸಿದೆ.