ಭಾರತ ಜೋಡೋ ಯಾತ್ರೆ ರಾಜ್ಯಕ್ಕೆ ಆಗಮಿಸಿ 4 ದಿನ ಕಳೆದಿದ್ದು, ಯಾತ್ರೆ ಅಕ್ಟೋಬರ್ 8ರಂದು ತುಮಕೂರು ಜಿಲ್ಲೆ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಸಂಸದ ಡಿ.ಕೆ.ಸುರೇಶ್ ಮಾರ್ಗ ಪರಿಶೀಲನೆ ನಡೆಸಿದರು.
ಮಂಡ್ಯದಿಂದ ನೇರವಾಗಿ ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿಗೆ ಯಾತ್ರೆ ಬರಲಿದ್ದು, ಭಾರತ ಜೋಡೋ ಯಾತ್ರೆ ತೆರಳಲಿರುವ ಮಾರ್ಗದಲ್ಲಿ ಜಿಲ್ಲೆಯ ಮುಖಂಡರು ಮಾರ್ಗ ಪರಿಶೀಲನೆ ಮಾಡಿದರು.
ಮಾರ್ಗ ಪರಿಶೀಲನೆ ವೇಳೆ ಮಾಜಿ ಶಾಸಕ ಷಡಕ್ಷರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ವಕ್ತಾರ ಮುರುಳೀಧರ ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ಮುಖಂಡರಾದ ಪ್ರಸನ್ನಕುಮಾರ್, ರವಿಕುಮಾರ್ ರಾಯಸಂದ್ರ, ಡಾ.ಅರುಂಧತಿ, ಚೌದ್ರಿ ರಂಗಪ್ಪ ಇದ್ದರು.
ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಮೂಲಕ ತೆರಳುತ್ತಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ರಾಜ್ಯದಲ್ಲಿ 21 ದಿನಗಳ ಕಾಲ ಸಂಚರಿಸಲಿದೆ. ಈಗ ಮಂಡ್ಯದ ಮೂಲಕ ತುರುವೇಕೆರೆಯನ್ನು ಪ್ರವೇಶಿಸಲಿದೆ.