ಕಳೆದ ಚುನಾವಣೆ ಸಮಯದಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೀನಿ ಎಂದು ಓಟು ಗಿಟ್ಟಿಸಿಕೊಂಡವರು ಪಕೋಡ ಮಾರಿ ಎನ್ನುತ್ತಾರೆ ಎಂದು ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
ಇದೇ ವೇಳೆ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಭರವಸೆ ಕೊಟ್ಟವರು ತುಟಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದ್ದಾರೆ.
ಒಂದು ಕಡೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಇನ್ನೊಂದು ಕಡೆ ನಡೆಯುವ ನೇಮಕಾತಿಗಳಲ್ಲಿ ಎಲ್ಲವೂ ಲಂಚದ ಹಾವಳಿ ನಡೆಯುತ್ತಿದೆ. ಅಮಾಯಕ ಯುವಜನತೆ ಇಂದು ಬಕ ಪಕ್ಷಿಯಂತೆ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಿರುದ್ಯೋಗಿ ಯುಜನತೆ ಧರಣಿ ನಡೆಸುತ್ತಿದ್ದು ಅವರಿಗೆ ಬೆಂಬಲ ನೀಡಿ ಅಹವಾಲು ಸ್ವೀಕರಿಸಿದೆ. ನಾಳೆ ಸದನದಲ್ಲಿಯೂ ಕೂಡ ನಿರುದ್ಯೋಗಿ ಯುವಜನತೆಯ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ತಿಳಿಸಿದ್ದಾರೆ.