ರಾಜ್ಯದ ಜಿಲ್ಲೆಗೊಂದು ವಿಶ್ವವಿದ್ಯಾಲಯವನ್ನು ಮಾಡುವುದು ಬೇಡ ಮತ್ತು ಅದಕ್ಕಾಗಿ 2 ಕೋಟಿ ರೂಪಾಯಿ ನೀಡುವುದು ವ್ಯರ್ಥ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು 4-5 ಕೋಟಿ ರೂಪಾಯಿ ನೀಡಿ ಕುಲಪತಿಗಳಾಗುತ್ತಾರೆ. ಹೀಗಾಗಿ ಕುಲಪತಿ ನೇಮಕದಲ್ಲಿ ಮತ್ತಷ್ಟು ಪಾರದರ್ಶಕತೆ ಕಾಪಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಒಂದು ವಿಶ್ವವಿದ್ಯಾಲಯ ಇದೆ. ಜೊತೆಗೆ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಅಕ್ಕಮಹಾದೇವಿ ವಿಶ್ವವಿದ್ಯಾಲಯಗಳು ಇವೆ. ಹಾಗಾಗಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಕುಲಪತಿ ನೇಮಕ ಮಾಡುವಾಗ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ನಾನು ಆಶುರೆನ್ಸ್ ಕಮಿಟಿ ಅಧ್ಯಕ್ಷನಾಗಿದ್ದಾಗ ನೋಡಿದ್ದಾನೆ ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯ ಸ್ಥಾಪನೆಗೆ 200 ಎಕರೆ ಭೂಮಿ ಹೊಡೆಯುತ್ತಾರೆ. ವಿಸಿ ಆಗಲು 4-5 ಕೋಟಿ ಕೊಟ್ಟು ಬರುತ್ತಾರೆ. ಹೀಗಾಗಿ ಕುಲಪತಿ ನೇಮಕದಲ್ಲಿ ಭಾರೀ ಅಕ್ರಮ ನಡೆಯುತ್ತಿದೆ. ಅವ್ಯವಹಾರವೂ ನಡೆಯುತ್ತದೆ ಎಂದಿದ್ದಾರೆ.
ವಿಜಯಪುರ, ಮೈಸೂರು ಮತ್ತು ವಿಟಿಯು ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಆಕ್ರಮ ನಡೆದಿದೆ ಎಂದು ದೂರಿದ್ದಾರೆ.