ನೀವು ಪ್ರವೀಣ್ ನೆಟ್ಟಾರ್, ಹರ್ಷ ಹತ್ಯೆ ಮಾಡಬಹುದು. ನಿಮಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎತ್ತಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಎತ್ತಿ ನೋಡೋಣ ಎಂದು ರಿಷಿಕುಮಾರ ಶ್ರೀ ಅಲಿಯಾಸ್ ಕಾಳೀ ಸ್ವಾಮಿಗಳು ಸವಾಲು ಹಾಕಿದ್ದಾರೆ.
ತುಮಕೂರಿನ ಟೌನ್ ಹಾಲ್ ನಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹತ್ಯೆಯ ಆರೋಪಿಗಳ ಭಾವಚಿತ್ರವನ್ನು ತುಳಿದು ನಂತರ ಭಾವಚಿತ್ರಗಳನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 35 ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದನ್ನು ನೋಡಿ ಅಳುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ. ಇನ್ನು ಮುಂದೆ ಯಾರೂ ಅಳಬಾರದು. ಪಿಎಫ್ಐ, ಎಸ್.ಡಿ.ಪಿಐ ಸಂಘಟನೆಯವರು ಹತ್ಯೆ ಮಾಡಿರುವುದು ಟೈಲರ್, ಆಟೋ ಡ್ರೈವರ್ ಮತ್ತು ಪ್ರವೀಣ್ ನೆಟ್ಟಾರ್ ಅವರಂಥವರನ್ನು ಎಂದು ಕಾಳಿ ಸ್ವಾಮಿ ಹೇಳಿದರು.
ನಿಮಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಹತ್ಯೆ ಮಾಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಹತ್ಯೆ ಮಾಡಿ. ಗೃಹ ಸಚಿವರನ್ನು ಎತ್ತಿ, ಆಗ ನೋಡೋಣ ಎಂದು ತಿಳಿಸಿದರು.
ಮಂಗಳೂರಿನಲ್ಲಿ ನಿನ್ನೆ ಒಬ್ಬ ಮುಸ್ಲೀಮರನ್ನು ಹತ್ಯೆ ಮಾಡಲಾಗಿದೆ. ಅದು ನಮ್ಮವರೇ ಮಾಡಿದ್ದರೆ ಅವರನ್ನು ಅಭಿನಂದಿಸುತ್ತೇನೆ. ಆದರೆ ಇನ್ನು ಒಂಬತ್ತು ತಲೆಗಳು ಬೇಕು. ನಮ್ಮವರು ಮಾಡಿಲ್ಲದಿದ್ದರೆ ಮಾಡುವ ಮನಸ್ಸು ಮಾಡಬೇಕು. ಒಬ್ಬ ಹಿಂದೂವಿನ ತಲೆ ಉರುಳಿದರೆ 10 ಮಂದಿ ಮುಸ್ಲೀಮರ ತಲೆ ಉರುಳಬೇಕು ಎಂದು ಕಾಳಿ ಸ್ವಾಮಿ ಪ್ರಚೋದನಾಕಾರಿ ಭಾಷಣ ಮಾಡಿದರು.