Thursday, September 19, 2024
Google search engine
Homeಜಿಲ್ಲೆತುಮಕೂರು - ಅಪರಿಚಿತ ವಾಹನ ಡಿಕ್ಕಿ - ಸ್ಥಳದಲ್ಲೇ ಇಬ್ಬರ ಸಾವು

ತುಮಕೂರು – ಅಪರಿಚಿತ ವಾಹನ ಡಿಕ್ಕಿ – ಸ್ಥಳದಲ್ಲೇ ಇಬ್ಬರ ಸಾವು

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕುಂಟೇಗೌಡನಹಳ್ಳಿ ಗೇಟ್ ಬಳಿ ಸಂಭವಿಸಿದೆ.

ಮೃತರನ್ನು ಮಹೇಶ್ (40) ಉಮೇಶ್ (40) ಎಂದು ಗುರುತಿಸಲಾಗಿದೆ.

ಕಾರು ಟೈರು ಪಂಚರ್ ಆಗಿತ್ತು. ಹೀಗಾಗಿ ಮಹೇಶ್ ಮತ್ತು ಉಮೇಶ್ ಟೈರಿಗೆ ಪಂಚರ್ ಹಾಕುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತುಮಕೂರು ಕಡೆಯಿಂದ ಶಿರಾಗೆ ಹೋಗುತ್ತಿರುವಾಗ ಮುಂಜಾನೆ ಘಟನೆ ಸಂಭವಿಸಿದೆ. ಮೃತರು ಬೆಂಗಳೂರಿನ ಅವಲಹಳ್ಳಿ ಗ್ರಾಮದ ನಿವಾಸಿಗಳು ಎಂದು ಹೇಳಲಾಗಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular