Friday, November 22, 2024
Google search engine
Homeಜಿಲ್ಲೆಕರವೇ ಮುಖಂಡರ ಬಿಡುಗಡೆಗೆ ಆಗ್ರಹ - ತುಮಕೂರಿನಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಕರವೇ ಮುಖಂಡರ ಬಿಡುಗಡೆಗೆ ಆಗ್ರಹ – ತುಮಕೂರಿನಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರವೇ ಕಾರ್ಯಕರ್ತರು, ಮುಖಂಡರ ಬಂಧವನ ವಿರೋಧಿಸಿ ಹಾಗೂ ತುಮಕೂರು ನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಸುವಂತೆ ಒತ್ತಾಯಿಸಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ನೆಲ. ಜಲ ಬಳಸಿಕೊಂಡು ತಮ್ಮ ಉದ್ಯಮ ಬೆಳೆಸುತ್ತಿರುವ ಬೇರೆ ರಾಜ್ಯಗಳ ಮಂದಿಗೆ ಕನ್ನಡ ಭಾಷೆ ಮಾತ್ರ ಬೇಡ ಎನ್ನುವುದು ತರವಲ್ಲ. ಕರ್ನಾಟಕ ಸರ್ಕಾರದ ಕರ್ನಾಟಕ ಶಾಪ್ಸ್ ಅಂಡ್ ಎಸ್ಲಾಬಿಷ್‌ಮೆಂಟ್ ಆಕ್ಸ್ ಕಲಂ 13 ಎ ಅಡಿಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳ ನಾಮಫಲಕ ಶೇ60ರಷ್ಟು ದಪ್ಪನಾಗಿ ಕನ್ನಡದಲ್ಲಿ, ಇತರೆ ಭಾಷೆಯಲ್ಲಿ ಶೇ40ರಷ್ಟು ಇರಬೇಕು ಎಂಬ ನಿಯಮವಿದೆ.

ಇದನ್ನು ಜಾರಿ ಮಾಡದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತವ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ಕನ್ನಡ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸರ್ಕಾರ ಅವರ ಮೇಲೆ ಹಾಕಿರುವ ಕೇಸನ್ನು ಕೂಡಲೇ ರದ್ದು ಮಾಡಿ, ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ತುಮಕೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿಗೆ ಎಲ್ಲಾ ಬಾಷಿಕರು ಬಂದು ತಮ್ಮ ವ್ಯಾಪಾರ ವಹಿವಾಟು ನಡೆಸುತಿದ್ದಾರೆ. ಆದರೆ ಬಹುತೇಕರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಹಾಕಿರುವ ನಾಮಫಲಕದಲ್ಲಿ ಕನ್ನಡದ ಬಳಕೆ ಬಗ್ಗೆ ನಿರ್ಲಕ್ಷ ತೋರಿದ್ದು, ಇದು ಖಂಡನೀಯ.

2024ರ ಜನವರಿ 15ರೊಳಗೆ ಕನ್ನಡ ನಾಮಫಲಕ ಪ್ರದರ್ಶಿಸಿದ ಅಂಗಡಿ ಮುಂಗಟ್ಟುಗಳ ಮಾಲೀಕರು ಆಗಿರುವ ನೂನ್ಯತೆಯನ್ನು ಸರಿಪಡಿಸಿಕೊಳ್ಳದಿದ್ದರೆ ಬೆಂಗಳೂರಿನ ರೀತಿ ತುಮಕೂರು ನಗರದಲ್ಲಿಯೂ ಕನ್ನಡ ಸಂಘಟನೆಗಳು ಬೀದಿಗಳಿದು ಕಾರ್ಯಾಚರಣೆ ನಡೆಸಲಿವೆ ಎಂದು ಧನಿಯಕುಮಾರ್ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಇಂದೇ ಪಾಲಿಕೆಯ ಮೂಲಕ ನಗರದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳ ಮಾಲೀಕರು ಕರ್ನಾಟಕ ಶಾಪ್ಸ್ ಅಂಡ್ ಎಸ್ಟಾಬಿಷ್‌ಮೆಂಟ್ ಕಾಯ್ದೆ 1963 ಕಲಂ 2ಎ ಅನ್ವಯ ತಮ್ಮ ಅಂಗಡಿ ಮುಂಗಟ್ಟುಗಳ ನಾಮಫಲಕರಗಳನ್ನು ಪರಿಷ್ಕರಿಸಿಕೊಳ್ಳಲು ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕನ್ನಡ ಸಂಘಟನೆಗಳ ಮುಖಂಡ ಕನ್ನಡ ಪ್ರಕಾಶ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಪಿ.ಎನ್.ರಾಮಯ್ಯ, ರಕ್ಷಿತ್ ಕರಿಮಣ್ಣೆ, ಶಬ್ಬೀರ ಅಹಮದ್, ರಾಮಚಂದ್ರರಾವ್, ಮಹಿಳಾ ಘಟಕದ ಸುಕನ್ಯ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular