ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿದ್ದು ಸಚಿವರ ಹೆಸರು ಮತ್ತು ನೀಡಿರುವ ಖಾತೆಗಳು ಈ ಕೆಳಗಿನಂತಿವೆ.
1 ಸಿದ್ದರಾಮಯ್ಯ – ಮುಖ್ಯಮಂತ್ರಿ, ಹಣಕಾಸು, ವಾರ್ತೆ ಮತ್ತು ಗುಪ್ತಚರ ಇಲಾಖೆ
2. ಡಿ.ಕೆ.ಶಿವಕುಮಾರ್ – ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆ
3. ಕೆ.ಎಚ್. ಮುನಿಯಪ್ಪ – ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ
4. ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
5. ಸತೀಶ್ ಜಾರಕೀಹೊಳಿ – ಲೋಕೋಪಯೋಗಿ
6. ಡಾ.ಜಿ.ಪರಮೇಶ್ವರ್ – ಗೃಹ ಸಚಿವ
7. ಜಮೀರ್ ಅಹಮದ್ ಖಾನ್ – ವಸತಿ ಮತ್ತು ವಕ್ಪ್ ಸಚಿವ
8. ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ
9. ಕೆ.ಜೆ.ಜಾರ್ಜ್ – ಇಂಧನ
10.ರಾಮಲಿಂಗಾ ರೆಡ್ಡಿ – ಸಾರಿಗೆ
11.ಎಚ್.ಕೆ.ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
12. ಕೃಷ್ಣಭೈರೇಗೌಡ – ಕಂದಾಯ
13. ಎನ್.ಚಲುವರಾಯಸ್ವಾಮಿ – ಕೃಷಿ
14. ಕೆ.ವೆಂಕಟೇಶ್ – ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ
15. ಡಾ.ಎಚ್.ಸಿ.ಮಹದೇವಪ್ಪ – ಸಮಾಜ ಕಲ್ಯಾಣ ಸಚಿವ
16. ಈಶ್ವರ್ ಖಂಡ್ರೆ – ಅರಣ್ಯ ಮತ್ತು ಪರಿಸರ ಖಾತೆ ಸಚಿವ
17. ಕೆ.ಎನ್.ರಾಜಣ್ಣ – ಸಹಕಾರ ಸಚಿವ
18. ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ
19. ಶರಣಬಸಪ್ಪ ದರ್ಶನಾಪೂರ್ – ಸಣ್ಣ ಕೈಗಾರಿಕೆ
20. ಶಿವಾನಂದ ಪಾಟೀಲ್ – ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ
21. ಆರ್.ಬಿ.ತಿಮ್ಮಾಪುರ – ಅಬಕಾರಿ ಸಚಿವ
22. ಎಸ್.ಎಸ್. ಮಲ್ಲಿಕಾರ್ಜುನ್ – ಗಣಿ ಮತ್ತು ಭೂವಿಜ್ಞಾನ ಸಚಿವ
23. ಶಿವರಾಜ್ ತಂಗಡಗಿ – ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ
24. ಡಾ.ಶರಣ ಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ
25. ಮಂಕಾಳು ವೈದ್ಯ – ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ
26. ಸಂತೋಶ್ ಲಾಡ್ – ಕಾರ್ಮಿಕ ಸಚಿವ
27. ಎನ್.ಎಸ್. ಬೋಸರಾಜ್ – ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
28. ಬೈರತಿ ಸುರೇಶ್ – ನಗರಾಭಿವೃದ್ಧಿ
29. ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ
30. ಎಂ.ಸಿ. ಸುಧಾಕರ್ – ವೈದ್ಯಕೀಯ ಶಿಕ್ಷಣ ಸಚಿವ
31. ಬಿ.ನಾಗೇಂದ್ರ – ಯುವಜನ ಸೇವೆ ಮತ್ತು ಕ್ರೀಡಾ ಮತ್ತು ಸಂಸ್ಕೃತಿ ಖಾತೆ ಸಚಿವ
32. ಲಕ್ಷ್ಮಿ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
33. ರಹೀಂ ಖಾನ್ – ಪೌರಾಡಳಿತ ಮತ್ತು ಹಜ್ ಖಾತೆ ಸಚಿವ
34. ಡಿ.ಸುಧಾಕರ್ – ಮೂಲ ಸೌಕರ್ಯ ಅಭಿವೃದ್ಧಿ ಸಚಿವ