ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಕಿವಿಗೆ ಮುಡಿಸೋ ಬಜೆಟ್ ಆಗಿದೆ ಎಂದು ಲೇವಡಿ ಮಾಡಿರುವ ಕಾಂಗ್ರೆಸ್ ಸದಸ್ಯರು ತಮ್ಮ ಕಿವಿಗಳಿಗೆ ಚಂಡು ಹೂ ಮುಡಿದುಕೊಂಡು ಸದನಕ್ಕೆ ಆಗಮಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್, ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ವಿಧಾನ ಸಭಾ ಸದಸ್ಯರು ಸದನಕ್ಕೆ ಕಿವಿಗೆ ಹೂ ಮುಡಿದುಕೊಂಡು ಬಂದು ಎಲ್ಲರ ಗಮನ ಸೆಳೆದರು.
2022-23ರ ಬಜೆಟ್ ನ ಹಂಚಿಕೆಗಳಲ್ಲಿ ಶೇಕಡ 56ರಷ್ಟು ಅನುದಾನವನ್ನು ವೆಚ್ಚ ಮಾಡಲಾಗಿದ್ದು ರಾಜ್ಯದ ಜನತೆಯ ಕವಿಗೆ ಹೂ ಮುಡಿಸಲಾಗಿದೆ ಎಂದು ಆರೋಪಿಸಿದರು.
ಕೇಂದ್ರದಿಂದ ರಾಜ್ಯದವರೆಗೂ ಬಿಜೆಪಿ ಮೊದಲಿಂದಲೂ ಜನರ ಕಿವಿ ಮೇಲೆ ಹೂವಿಡುತ್ತಲೇ ಬಂದಿದೆ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಕಿವಿ ಮೇಲೆ ಹೂವಿಟ್ಟರು. ಈಗ ರಾಜ್ಯ ಬಜೆಟ್‌ನಲ್ಲಿ ಕನ್ನಡಿಗರ ಕಿವಿ ಮೇಲೆ ಹೂವಿಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ದೂರಿದರು.
ಪ್ರಣಾಳಿಕೆಯಲ್ಲಿನ 90ರಷ್ಟು ಭರವಸೆ ಈಡೇರಿಸದ ಬಿಜೆಪಿ ಬಜೆಟ್‌ನಲ್ಲಿ ಹೇಳಿದ್ದು ಮಾಡುವುದೇ! ಎಂದು ಪ್ರಶ್ನಿಸಿದ್ದಾರೆ.