ಹುಲಿ ದಾಳಿಗೆ ಆದಿವಾಸಿ ಯುವಕ ಬಲಿಯಾಗಿರುವ ಘಟನೆ ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಮೃತ ಯುವಕನನ್ನು ಮಂಜು ಎಂದು ಗುರುತಿಸಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ದಾಳಿಗೆ ಸಿಲುಕಿದ ಬುಡಕಟ್ಟು ಸಮುದಾಯದ ಯುವಕ ಮಂಜು ಸಾವನ್ನಪ್ಪಿದ್ದಾನೆಂದು ಮಾಧ್ಯಮಗಳು ವರದಿ ಮಾಡಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಅರಣ್ಯದಲ್ಲಿ ಈ ದುರ್ಘಟನೆ ನಡೆದಿದೆ. ವಸತಿ ಗೃಹದ ಹಿಂಭಾಗದಲ್ಲಿರುವ ಕಾಡಿಗೆ ಸೌದೆ ಸಂಗ್ರಹಿಸಲು ಹೋಗಿದ್ದ ಯುವಕ ಮಂಜು ಮೇಲೆ ಹುಲಿ ದಾಳಿ ನಡೆಸಿದೆ.
ಹುಲಿ ದಾಳಿಗೆ ಸಿಲುಕಿದ ಮಂಜುವಿನ ತಲೆ ಸೀಳಿದೆ. ಮಂಜು ಜೊತೆ ಇದ್ದವರು ದಿಕ್ಕಾಪಾಲಾಗಿ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಂಜು ಮೃತ ದೇಹವನ್ನು ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ತಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಪತ್ತೆಗೆ ಬಲೆ ಬೀಸಿದೆ.
ಘಟನೆ ಬಗ್ಗೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.